ಸೆಖೆ ಆದಾಗ ಏನು ಮಾಡುವುದು?

ಸೆಖೆ ಆದಾಗ ಏನು ಮಾಡುವುದು?

ಸೆಖೆ ಆದಾಗ ಏನು ಮಾಡುವುದು?


»»
ಚೋಮಣ್ಣ: ಬೂಬಣ್ಣ! ಸೆಖೆ ಆದಾಗ ಏನು ಮಾಡುವುದು?
ಬೂಬಣ್ಣ: ಹವಾನಿಯಂತ್ರಕದ(air conditioner) ಎದುರು ಕುಳಿತುಬಿಡು.
ಚೋಮಣ್ಣ: ಇನ್ನೂ ಹೆಚ್ಚಿಗೆ ಸೆಖೆ ಆದರೆ….?
ಬೂಬಣ್ಣ: ಆಗ ಹವಾನಿಯಂತ್ರಕವನ್ನು ಚಾಲೂ (on) ಮಾಡು…

»»
ರೋಗಿ: ನನಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಿದ್ರೆ ಬರುತ್ತದೆ…
ವೈದ್ಯ: ಅದಕ್ಕೇನೀಗ? ಚೆನ್ನಾಗಿ ನಿದ್ರೆ ಮಾಡಿ. ಏನು ಗೊರಕೆ ಸಮಸ್ಯೆನಾ?
ರೋಗಿ: ಪೂರ್ತಿ ಕೇಳಿಸ್ಕೊಳ್ಳಿ ಸಾರ್. ಗೊರಕೆ ಗಿರಕೆ ಆಮೇಲಾಯ್ತು ಬಿಡಿ, ಆ ಬಸ್ಸಿನ ಚಾಲಕ* (driver) ನಾನೇ!

»»
ಬೂಬಣ್ಣ: ಸ್ವಾಮೀಜಿ! ನಾನು ಏನೂ ಕೆಲಸ ಮಾಡುವ ಅಗತ್ಯವಿಲ್ಲದೇ ಇರೋ ನೌಕರಿ ಯಾವುದಿದೆ? ಅದರಲ್ಲಿ ಬೇರೆಯವರೇ ಕೆಲಸ ಮಾಡಬೇಕು, ಆದರೆ ಹಣ ನನಗೆ ಸಿಗಬೇಕು…
ಸ್ವಾಮೀಜಿ: ಮಗೂ.. ಹೋಗು! ಶೌಚಾಲಯದಲ್ಲಿ ಕೆಲಸ ಮಾಡು…

»» ಬೂಬಣ್ಣನವರು ಚಿಕ್ಕವರಾಗಿದ್ದಾಗ…
ರಾಮಣ್ಣ: ಪರೀಕ್ಷೆಯಲ್ಲಿ ಬರೆಯಲು ನನಗೇನೂ ಗೋಚರಿಸಲಿಲ್ಲ. ಹಾಳೆ ಖಾಲಿ ಬಿಟ್ಟು ಬಂದೆ..
ಚೋಮಣ್ಣ: ನಾನೂ ಸಹ… ಖಾಲಿ ಹಾಳೆ ಕೊಟ್ಟು ಬಂದೆ..
ಬೂಬಣ್ಣ: ಆಯ್ಯಯ್ಯೋ! ನನ್ನ ಹಾಳೆಯೂ ಖಾಲಿಯಾಗೇ ಇತ್ತು! ನಾವು ನಕಲು*(copy) ಹೊಡೆದಿದ್ದೇವೆಂದು ಮೇಷ್ಟ್ರು ಭಾವಿಸುತ್ತಾರೆ!!

»»
ಜೀವಶಾಸ್ತ್ರದ ಶಿಕ್ಷಕಿ: ನಮಗೆ ಮೊಟ್ಟೆ ಕೊಡುವ ಯಾವುದಾದರೂ ನಾಲ್ಕು ಜೀವಿಗಳ ಹೆಸರು ಹೇಳು.
ಬೂಬಣ್ಣ: ಭೌತಶಾಸ್ತ್ರ ಅಧ್ಯಾಪಕರು, ಗಣಿತಶಾಸ್ತ್ರ ಅಧ್ಯಾಪಕರು, ರಾಸಯನಶಾಸ್ತ್ರದ ಅಧ್ಯಾಪಕಿ, ಹಾಗೂ ಕನ್ನಡದ ಅಧ್ಯಾಪಕಿ…

»» ತರಗತಿ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಚೋಮಣ್ಣ ಎದ್ದು ಹೊರಗೆ ನಡೆದ.
ಶಿಕ್ಷಕ: ಇದೇನಿದು?! ಇವನಿಗೇನಾಗಿದೆ?
ಬೂಬಣ್ಣ: ಸಾರ್, ಅವನಿಗೆ ಒಳ್ಳೇ ನಿದ್ರೆಯಲ್ಲಿ ನಡೆದಾಡುವ ಅಭ್ಯಾಸವಿದೆ…

»» ಬೂಬಣ್ಣನ ಮನೆಯ ಪ್ಲಗ್ನಲ್ಲಿ ಹೊಗೆ ಬರ್ತಾ ಇತ್ತು.
ತಕ್ಷಣ ಬೂಬಣ್ಣ ಮೆಸ್ಕೋಮ್ ಗೆ (MESCOM) ಫೋನ್ ಮಾಡಿ, “ಏಯ್! ಯಾರಯ್ಯಾ ಅದು? ಸಿಗರೇಟು ಸೇದಿ ನಮ್ಮನೆ ಪ್ಲಗ್ಗಿನಲ್ಲಿ ಹೊಗೇ ಬಿಡೋದು?!”

»»
ಬಸ್ ಕಂಡಕ್ಟರ್: ಅಜ್ಜಿ! ಮೂರು ಸಲ ನಿಮ್ಮ ಸ್ಟಾಪ್ ಬಂತು ಅಂತ ಶಿಳ್ಳೆ ಹೊಡೆದ್ರೂ ತಿರುಗಿಯೂ ನೋಡಿಲ್ವಲ್ಲಾ ನೀವು…
ಅಜ್ಜಿ: ಮಗೂ, ಶಿಳ್ಳೆ ಹೊಡೆದ್ರೆ ತಿರುಗಿ ನೋಡೊ ವಯಸ್ಸಲ್ಲಪ್ಪಾ ನಂದು…

ಹಾಗೂ ಇಂದಿಗೆ ಕೊನೆಯದಾಗಿ…»»
ರಾಮಣ್ಣ: ನೀರು ಕುದಿಸಿದಾಗ ಅದರಲ್ಲಿರುವ ಕೀಟಾಣುಗಳೆಲ್ಲ ಸತ್ತು ಹೋಗುತ್ತವೆ. ಆದ್ದರಿಂದ ಕುದಿಸಿದ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು…
ಬೂಬಣ್ಣ: ಅಯ್ಯೋ! ಆದರೆ ಸತ್ತು ಹೋದ ಕೀಟಾಣುಗಳ ಶವಗಳು ಆ ನೀರಲ್ಲೇ ತೇಲುತ್ತಿರುತ್ತವಲ್ಲಾ!!!

ಚಿತ್ರಕೃಪೆ: 500px-Air_conditioner.png By Paul Robinson (New Image) [LGPL, GFDL or CC-BY-SA-3.0], via Wikimedia Commons

1 thoughts on “ಸೆಖೆ ಆದಾಗ ಏನು ಮಾಡುವುದು?

ನಿಮ್ಮ ಟಿಪ್ಪಣಿ ಬರೆಯಿರಿ