ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ!

ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ!

ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ!


ಗ್ರಾಹಕ: ಮಾಣಿ! ಮಾಣಿ! (ವೈಟರ್! ವೈಟರ್!!) ನನ್ನ ಮಜ್ಜಿಗೆಯಲ್ಲಿ ಒಂದು ನೋಣವಿದೆ!
ಹೋಟೆಲ್ ಮಾಣಿ: ಚಿಂತೆ ಮಾಡಬೇಡಿ ಸ್ವಾಮಿ! ನಿಮ್ಮ ಊಟದಲ್ಲಿರೋ ಜೇಡ ಅದನ್ನು ಹಿಡಿಯುತ್ತೆ..

ಆರಕ್ಷಕ(ಪೋಲೀಸ್): ಓಯ್! ಮಧ್ಯರಾತ್ರಿಯಲ್ಲಿ ಎಲ್ಲಿಗೆ ಹೋಗ್ತಿದ್ದೀ?!
ಕುಡುಕ: ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಒಂದು ಉಪನ್ಯಾಸ ಕೇಳಲು ಹೋಗ್ತಿದ್ದೇನೆ..
ಆರಕ್ಷಕ(ಪೋಲೀಸ್): ಏಯ್! ಸುಳ್ಳು ಹೇಳ್ತಿಯೇನೋ! ಈ ಹೊತ್ತಿನಲ್ಲಿ ಯಾರು ಎಲ್ಲಿ ಉಪನ್ಯಾಸ ಕೊಡ್ತಾರೆ?
ಕುಡುಕ: ನನ್ನ ಹೆಂಡತಿ ಕೊಡ್ತಾಳೆ ಸಾರ್.. ನಮ್ಮನೆಯಲ್ಲಿ….

ವಿದ್ಯಾರ್ಥಿ: ನಾನು ಮಾಡದೇ ಇದ್ದ ಕೃತ್ಯಕ್ಕಾಗಿ ನನಗೆ ಶಿಕ್ಷೆ ಕೊಡುವರೇ?
ಅಧ್ಯಾಪಕ: ಅಯ್ಯಯ್ಯೋ! ಹಾಗೆಲ್ಲಾದರೂ ಉಂಟೇ?!
ವಿದ್ಯಾರ್ಥಿ: ಸಧ್ಯ! ನಾನು ನನ್ನ ಮನೆಕೆಲಸ(ಹೋಂವರ್ಕ್) ಮಾಡಿಲ್ಲ…

ಹೆಂಡತಿ: ನಮ್ಮ ಅಡುಗೆಯವನನ್ನು ವಜಾ ಮಾಡಿ, ಇನ್ನು ಮುಂದೆ ಅಡುಗೆ ನಾನೇ ಮಾಡಿದರೆ ನನಗೆಷ್ಟು ಹಣ ಕೊಡುವಿರಿ?!
ಗಂಡ: ಹಾಗೇನಾದರೂ ಆದ್ರೆ, ನಾನೇನನ್ನೂ ಕೊಡೋ ಅವಶ್ಯಕತೆಯೇ ಇರುವುದಿಲ್ಲ! ನನ್ನ ಸಂಪೂರ್ಣ ಜೀವ ವಿಮೆಯ(ಇನ್ಶೂರನ್ಸ್) ಮೊತ್ತ ನಿನಗೇ ಸಿಗುತ್ತದೆ..

ಮಗ: ಹೋದ ವರ್ಷ ಅಮ್ಮನ ಹೊಟ್ಟೆ ದೊಡ್ಡದಾದ ಮತ್ತೆ ನನ್ನ ತಂಗಿ ಹುಟ್ಟಿದಳು. ಅಲ್ವಾ?
ಅಪ್ಪ: ಹೌದು ಮರೀ.. ಅದಕ್ಕೇನೀಗ?
ಮಗ: ಹಾಗಾದ್ರೆ ಈ ಬಾರಿ  ನಿನ್ನ ಹೊಟ್ಟೆ ದೊಡ್ಡದಾಗಿದೆಯಲ್ಲಾ, ತಮ್ಮ ಹುಟ್ತಾನ?

ಅಧ್ಯಾಪಕಿ: ಭೋಲೂ, ನಿನ್ನ ನಮ್ಮ ಮನೆಯ ಸಾಕುಪ್ರಾಣಿಯ ಪ್ರಬಂಧ ನಿನ್ನ ಅಣ್ಣನ ಪ್ರಬಂಧದ ಹಾಗೆಯೆ ಇದೆಯಲ್ಲಾ! ಅವನ ಪ್ರಬಂಧ ಕಾಪಿ ಹೊಡೆದಿರುವಿಯಾ?..
ಭೋಲು: ಇಲ್ಲಾ ಟೀಚರ್! ನಮ್ಮನೇಲಿರೋದು ಒಂದೇ ನಾಯಿ.. ಅದಕ್ಕೆ…

ಅವನು: ತನ್ನ ಹೆಂಡ್ತಿಯನ್ನು ನದಿಗೆ ಎಸೆದ ಗಂಡನ ಬಗ್ಗೆ ಗೊತ್ತಿದೆಯಾ?
ಇವನು: ಇಲ್ಲಾ! ಏನಾಯ್ತು??
ಅವನು: ಅವನನ್ನು ಈಗ ಪ್ರಾಣಿ ದಯಾ ಸಂಘದವರು ನದಿಯಲ್ಲಿದ್ದ ಮೊಸಳೆಗಳ ಮೇಲೆ ಕ್ರೌರ್ಯ ಎಸಗಿದ್ದಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ…

ಓಬ್ಬಳು ಹುಡುಗಿ ತನ್ನ ತಂದೆಗೆ ತನ್ನದೇ ನಿಶ್ಚಿತಾರ್ಥದ(engagement) ಬಗ್ಗೆ ದೂರವಾಣಿಯ(telephone) ಮೂಲಕ ಹೇಳುತ್ತಿದ್ದಾಳೆ….. (ಇತ್ತೀಚೆಗೆ ಇವೆಲ್ಲಾ ಸಾಮಾನ್ಯ, ಬಿಡಿ!)
ತಂದೆ: ಅವನ ಸಂಪಾದನೆ ಎಷ್ಟು? ಆಸ್ತಿ ಗೀಸ್ತಿ ಏನಾದ್ರೂ ಇದೆಯಾ?…
ಮಗಳು: ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ! ಅವನೂ ನಿಮ್ಮ ಬಗ್ಗೆ ಅದನ್ನೇ ಕೇಳ್ತಾ ಇದ್ದ…

ಹಾಗೂ ಇಂದಿಗೆ ಕೊನೆಯದಾಗಿ
»» ಮನಸ್ಸಿಲ್ಲದೇ, ಹೋಸಾ ಕಾರು ಕೊಂಡ ಗಂಡನು ತನ್ನ ಹೆಂಡತಿಯ ಒತ್ತಾಯಕ್ಕೆ ಕೊನೆಗೂ ಮಣಿದು, ಹೊಸಾ ಕಾರಿನ ಕೀಲಿಯನ್ನು (ಕೀ ಅನ್ನು) ನೀಡುತ್ತಾ ಹೇಳಿದ,
“ನೆನಪಿರಲಿ! ಎಲ್ಲಾದರೂ ಅಫಘಾತವಾದಲ್ಲಿ, ಪತ್ರಿಕೆಯವರು ನಿನ್ನ ವಯಸ್ಸನ್ನೂ ಮುದ್ರಿಸುತ್ತಾರೆ!”

ಚಿತ್ರಕೃಪೆ: 500px-FAQ_icon.png By AlphaZeta (Own work) [CC0], via Wikimedia Commons

Advertisements

2 thoughts on “ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s