ದೇವರ ವಿಳಾಸ!

ದೇವರ ವಿಳಾಸ

ಕಣ್ಣಿನ ತಜ್ಞ : ಗೋಡೆಯ ಮೇಲಿನ ಅಕ್ಷರಗಳನ್ನು ಓದಿ
ರೋಗಿ : ಯಾವ ಗೋಡೆ? ಎಂತಹ ಅಕ್ಷರ??!

»»
ರಿಂಗಿಸುತ್ತಿದ್ದ ದೂರವಾಣಿಯ ಕರೆಯ ಉತ್ತರಿಸಿದ ಹೆಂಡತಿ, ಒಂದು ಕ್ಷಣದ ಬಳಿಕ,
ಹೆಂಡತಿ : ಯಾರ್ರೀ ಅದು ಜೂಲಿ?!
ಗಂಡ : ಅದು… ನನ್ನ.. ಬಾಸ್ ನ ಮುದ್ದಿನ ಸಾಕು ನಾಯಿ ಕಣೇ! ಯಾಕೆ, ಏನಾಯ್ತೀಗ?
ಹೆಂಡತಿ : ಓಹೋ! ಏನಿಲ್ಲ, ನಿಮ್ಮ ಬಾಸ್ ನ ಮುದ್ದಿನ ಸಾಕು ನಾಯಿ ಫೋನ್ ಮಾಡಿದೆ. ನಿಮ್ಮ ಬಳಿ ಮಾತನಾಡಬೇಕಂತೆ…

ಗಂಡ : ಇತ್ತೀಚೆಗೆ ಬರುವ ದೂರವಾಣಿ ಕರೆಗಳಿಗೆಲ್ಲಾ ’ರಾಂಗ್ ನಂಬರ್’ ಎಂದು ಫೋನ್ ಇಡುತ್ತಿರುವಿಯಲ್ಲಾ, ನಿನಗೇನಾಯ್ತೀಗ?
ಹೆಂಡತಿ : ನಿಮಗೆ ಸಾಲ ಕೊಟ್ಟವರ ಕರೆಗಳು ಅವು. ನೀವಿಲ್ಲಿದ್ದೀರೆಂದು ನಿಮಗೆ ಫೋನ್ ಕೊಡಲೇ?

ತಾಯಿ : ನೋಡಪ್ಪ ಅವರ ಮನೆಗೆ ಹೋದಾಗ ಗಲಾಟೆ ಮಾಡಬೇಡ! ನೀನು ಒಳ್ಳೆಯ ಹುಡುಗನಾಗಿದ್ದಲ್ಲಿ ನಿನಗೊಂದು ಹೊಸಾ ಐವತ್ತು ರೂಪಾಯಿಯ ನೋಟು ಕೊಡುವೆ.
ಮಗ : ನನಗೆ ಆ ಹೊಸಾ ನೋಟು ಬೇಡ, ಆದರೆ ನೂರು ಅಥವಾ ಐನೂರು ರೂಪಾಯಿಯ ಹಳೇ ನೋಟು ಕೊಡು ಪರವಾಗಿಲ್ಲ.

»»ಕಾಮಣ್ಣನಿಗೆ ಹುಡುಗಿಯರ ಛೇಡಿಸುವ ಹವ್ಯಾಸ. ಒಮ್ಮೆ ಬಸ್ ನಿಲ್ದಾಣದಲ್ಲಿ:
ಕಾಮಣ್ಣ : ನಿಮ್ಮನ್ನೆಲ್ಲೋ ನೋಡಿದ ಹಾಗಿದೆಯಲ್ಲಾ…
ಹುದುಗಿ : ಓ! ನನಗೆ ಗೊತ್ತು, ಎಲ್ಲಿ ನೋಡಿರುತ್ತೀರೆಂದು. ನಾನು ಹುಚ್ಚರ ಆಸ್ಪತ್ರೆಯಲ್ಲಿ ನರ್ಸು. ಅಲ್ಲಿಯೇ ನಿಮ್ಮನ್ನು ಭೇಟಿಯಾಗಿದ್ದು. ಆದರೆ ಹುಚ್ಚು ಬಿಡದವರು ಬಿಡುಗಡೆ ಪಡೆಯಲ್ಲವಲ್ಲ. ನೀವು ಯಾವತ್ತು ಅಲ್ಲಿಂದ ಪರಾರಿಯಾದಿರಿ??!

ಸತಿ ಸಾವಿತ್ರಿಯ ಪ್ರಸಂಗ:
ಕಾಲೇಜೊಂದರಲ್ಲಿ ಸತಿ ಸಾವಿತ್ರಿಯ ನಾಟಕ ನಡೆಯುತ್ತಲಿತ್ತು…
ನಾಟಕದಲ್ಲಿ ಸತ್ಯವಾನ್ ಮತ್ತು ಸಾವಿತ್ರಿಯು ಕಾಡಲ್ಲಿ ನಡೆದಾಡುತ್ತಾ ಒಂದು ಮರದ ಕೆಳಗೆ ಬಂದು ಕುಳಿತರು. ಆಗ ಸತ್ಯವಾನ್, “ಓ ದೇವರೇ! ನನಗೆ ಬಲು ಪ್ರಯಾಸವಾಗಿದೆ, ತಲೆಯು ತುಂಬಾ ನೋಯುತ್ತಿದೆ” ಎಂದು ಸಾವಿತ್ರಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ.
ಸಾವಿತ್ರಿಯ ಪಾತ್ರ ನಟಿಸುತ್ತಿದಾಕೆಗೆ ತಾವು ನಾಟಕವಾಡುತ್ತಿರುವುದು ಮರೆತುಹೋಗಿ ಬೊಬ್ಬಿಡುತ್ತಾಳೆ, “ಅದೆಷ್ಟು ಬಾರಿ ಹೀಗೆಲ್ಲ ಉದ್ಯಾನದಲ್ಲಿ ನನ್ನ ಕಾಲ ಮೇಲೆ ಮಲಗಬೇಡವೆಂದು ಹೇಳಬೇಕು?! ನೋಡು ಹೇಗೆ ನನ್ನ ತಂದೆ-ತಾಯಿ ಮತ್ತು ಇಡೀ ಕಾಲೇಜು ನಮ್ಮನ್ನೇ ನೋಡುತ್ತಿದೆ! ನಿನಗೆ ನಾಚಿಕೆಯಾಗಲ್ಲವೇ, ಮೂರ್ಖಾ!”

ಹಾಗೂ, ಇಂದಿಗೆ ಕೊನೆಯದಾಗಿ,
ದೇವರ ವಿಳಾಸ :
ಒಬ್ಬ ಕುಂಟ ಭಿಕ್ಷುಕನು, “ಭಗವಂತನ ಹೆಸರಲ್ಲಿ ಏನಾದರೂ ಕೊಡಿ..” ಎಂದು ದಿನವಿಡೀ ಬೇಡುತ್ತಿದ್ದ. ದಿನವಿಡೀ ಆತನಿಕ್ಕೆ ದಕ್ಕಿದ್ದು ಒಂದು ರುಪಾಯಿ, ಐವತ್ತು ಪೈಸೆ ಎಂಬಂತೆ ಸುಮಾರು ಎಂಭತ್ತು ರುಪಾಯಿಗಳು.
ಸಂಜೆಯಾದೊಡನೆ ಬಾರ್ ಒಂದರ ಹೊರಗೆ ಕುಳಿತಾಗ, ಹತ್ತು, ಐವತ್ತು ರುಪಾಯಿಯ ನೋಟುಗಳು ಸಿಗಲಾರಂಭಿಸಿದವು. ಸುಮಾರು ಅರ್ಧ ತಾಸಿನಲ್ಲಿ ನೂರು ರುಪಾಯಿಯ ಭಿಕ್ಷೆಯಲ್ಲಿ ಗಳಿಸಿದ್ದ. ಆಗ ಆತ ದೇವರಿಗೆ ಕೈ ಮುಗಿದು ಪ್ರಾರ್ಥಿಸಿದ, “ಓ ದೇವರೇ! ನಿನ್ನ ವಿಳಾಸವೊಂದು, ನೀನಿರುವುದು ಇನ್ನೊಂದೆಡೆ!”

————————————————————————————————
ಚಿತ್ರಕೃಪೆ : Face-espiegle.svg By Moi. (De mon disque dur.) [Public domain], via Wikimedia Commons
————————————————————————————————
See the English version of this post Here.

Advertisements

One thought on “ದೇವರ ವಿಳಾಸ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s