ಊಟ ಮಾಡುವಾಗ ಮಾತನಾಡಬಾರದು!

ಊಟ ಮಾಡುವಾಗ ಮಾತನಾಡಬಾರದು!

ಊಟ ಮಾಡುವಾಗ ಮಾತನಾಡಬಾರದು!


»» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ…
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ…

»» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ..
ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ?
ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ..

»» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ..
ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು..
ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ ೨೦೦೯ (2009)!

»» ಒಮ್ಮೆ ಬೂಬಣ್ಣನಿಗೊಂದು ಚಿಕ್ಕ ಹೊಟ್ಟೆಯ ಆಪರೇಷನ್ ಆಯ್ತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೊದಲು, ವೈದ್ಯರು(doctor) ಇನ್ನೊಂದು ಕ್ಷ-ಕಿರಣ ತಪಾಸಣೆಗೊಳಪಡಿಸಿದರು(x-ray test). ಆಗ ವೈದ್ಯರಿಗೆ ತಮ್ಮ ಕೈಗವಸು(gloves) ಇನ್ನೂ ಬೂಬಣ್ಣನ ಹೊಟ್ಟೆಯೊಳಗೇ ಇರುವ ಸಂಗತಿ ತಿಳಿಯಿತು!
ವೈದ್ಯರು(ಈ ವಿಷಯ ಬೂಬಣ್ಣನಿಗೆ ತಿಳಿಸುತ್ತಾ..): ಬೂಬಣ್ಣ! ಈ ತಪ್ಪಿಗಾಗಿ ಕ್ಷಮಿಸು. ಅದನ್ನು ಹೊರತೆಗೆಯಲು ಇನ್ನೊಂದು ಚಿಕ್ಕ ಆಪರೇಷನ್ ಮಾಡಬೇಕಾಗಿದೆ…
ಬೂಬಣ್ಣ: ಅಯ್ಯೋ! ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?! ಈ ಹಣ ತಗೊಂಡು ಒಂದು ಹೊಸಾ ಕೈಗವಸು ಕೊಂಡುಕೊಳ್ಳಿ…

»»
ಬೂಬಣ್ಣ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ!
ರಾಮಣ್ಣ: ನಿಜವಾಗಿಯೂ?! ಏನದರ ಹೆಸರು?
ಬೂಬಣ್ಣ: “ಮೀಯಾಂವ್”!

»»
ರಾಮಣ್ಣ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ?
ಬೂಬಣ್ಣ: ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?!

»»
ರಾಮಣ್ಣ: ಬರಲೇ ಬೂಬಣ್ಣ, ನಾನು ಹಂಪನಕಟ್ಟೆಯಲ್ಲಿ ಬಸ್ಸು ಹಿಡಿದು ಹೋಗುತ್ತೇನೆ…
ಬೂಬಣ್ಣ: ಅದನ್ನು ಹಿಡಿಯಲು ಹೇಗೆ ಸಾಧ್ಯ?! ಬಸ್ಸುಗಳು ನಿನಗಿಂತ ತುಂಬಾ ದೊಡ್ಡ ಹಾಗೂ ಭಾರ ಇರುತ್ತವೆ..

»» ಬೂಬಣ್ಣ ಚಿಕ್ಕವನಿರುವಾಗ, ದೀಪಾವಳಿ ಸಮಯದಲ್ಲಿ ತನ್ನ ಅಮ್ಮನ ಜೊತೆಯಲ್ಲಿ ಖರೀದಿಗೆ ಹೊರಟಾಗ…
ಚಿಕ್ಕ ಬೂಬಣ್ಣ: ಅಮ್ಮಾ! ಅಮ್ಮಾ!.. ನಂಗೆ ಆ ಕೆಂಪು ಬಣ್ಣದ ದೊಡ್ಡ ಪಟಾಕಿ ಬೇಕು! ಅದ್ರಿಂದ ದೊಡ್ಡ ಸದ್ದಾಗುತ್ತದೆ.. ನಂಗದೇ ಬೇಕು!..
ಅಮ್ಮ: ಏನು.. ..!!!!.. ಅಯ್ಯೊ! ದೇವರೇ!! ಮೂರ್ಖಾ! ಅದು ದೊಡ್ಡ ಪಟಾಕಿಯಲ್ಲ, ಗ್ಯಾಸ್ ಸಿಲಿಂಡರು!!

»» ಚಿಕ್ಕವನಾಗಿದ್ದಾಗ, ಬೂಬಣ್ಣನಿಗೊಮ್ಮೆ ಒಂದು ಹುಲಿಮರಿ ಸಿಕ್ಕಿತು. ಅದನ್ನು ಹಿಡಿದುಕೊಂಡು ತನ್ನ ತಂದೆಯ ಬಳಿ ತಂದನು..
ಬೂಬಣ್ಣ: ಅಪ್ಪಾ! ನಂಗಿದು ದಾರಿಯಲ್ಲಿ ಸಿಕ್ಕಿತು. ಏನು ಮಾಡಲಿ?
ಅಪ್ಪ(ಹೆದರಿಕೊಂಡು): ಅದನ್ನು ಈಗಲೇ ಮೃಗಾಲಯಕ್ಕೆ(zoo) ಕರೆದುಕೊಂಡು ಹೊಗು!
ಮರುದಿನ ಬೂಬಣ್ಣನ ಅಪ್ಪ ನೋಡಿದ್ರೆ, ಆ ಹುಲಿಮರಿಯು ಇನ್ನೂ ಬೂಬಣ್ಣನ ಬಳಿಯೇ ಇತ್ತು!
ಅಪ್ಪ: ನಿನಗೆ ಹೇಳಿದ್ರೆ ಭಾಷೆ ಇಲ್ಲವೇ?! ಅದನ್ನು ನಿನ್ನೆಯೇ ಮೃಗಾಲಯಕ್ಕೆ ಕರೆದುಕೊಂಡು ಹೋಗೆಂದು ಹೇಳಿದ್ದೆನಲ್ಲಾ..
ಬೂಬಣ್ಣ: ಆದ್ರೆ ಅಪ್ಪಾ! ನೀನು ಹೇಳಿದ ಹಾಗೆಯೇ ನಿನ್ನೆ ಮೃಗಾಲಯಕ್ಕೆ ಅದನ್ನು ಕೊಂಡೊಯ್ದಿದ್ದೆ.. ಇವತ್ತು ಅದನ್ನು ತಿರುಗಾಡಿಸಲು ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋಣ ಅಂತಿದ್ದೇನೆ..

ಹಾಗೂ, ಇಂದಿಗೆ ಕೊನೆಯದಾಗಿ»» ಚಿಕ್ಕವನಾಗಿದ್ದಾಗ, ಒಮ್ಮೆ ಬೂಬಣ್ಣ ತನ್ನ ತಂದೆಯೊಡನೆ ಊಟ ಮಾಡುತ್ತಿದ್ದನು…
ಬೂಬಣ್ಣ: ಅಪ್ಪಾ! ಒಂದು ವಿಷಯ…
ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು!
ಬೂಬಣ್ಣ: ಆದ್ರೆ ಅಪ್ಪಾ!…
ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು!
ಮತ್ತೆ ಬೂಬಣ್ಣ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ…
ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು?
ಬೂಬಣ್ಣ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು…

ಚಿತ್ರಕೃಪೆ: Lunch_from_Karnataka_on_a_plantain_leaf.jpg on Wikimedia Commons.

Advertisements

16 thoughts on “ಊಟ ಮಾಡುವಾಗ ಮಾತನಾಡಬಾರದು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s