ದೇವರೆಲ್ಲಿರುವನು?….

ದೇವರೆಲ್ಲಿರುವನು?

ದೇವರೆಲ್ಲಿರುವನು?

ಬೂಬಣ್ಣ: ಮೂರ್ಖತನದ ಪರಮಾವಧಿ ಯಾವುದು?
ರಾಮಣ್ಣ: ಹಂ… ನಿನ್ನ ಭಾವಚಿತ್ರ ನೋಡು, ತಿಳಿಯುತ್ತೆ!

ಸಂತ: ದೇವರೆಲ್ಲಿರುವನು?….
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, “ಓ ದೇವರೇ! ನೀನಿನ್ನೂ ಇಲ್ಲಿದ್ದೀಯಾ..”

ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ. ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..

ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..

ಬೂಬಣ್ಣ ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ ಕರೆದೊಯ್ಯುತ್ತಾನೆ…
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?! ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..

ಚಿಕ್ಕ ಬೂಬಣ್ಣ: ಅಪ್ಪಾ, ಇವತ್ತು ಅಧ್ಯಾಪಕಿಯು, ಮುಂದೆ ನಿನ್ನ ಯಾವುದಾದರೂ ತಮ್ಮ, ತಂಗಿಯವರು ಶಾಲೆಗೆ ಬರಲಿರುವರೇ ಎಂದು ಕೇಳಿದ್ರು..
ಬೂಬಣ್ಣನ ಅಪ್ಪ: ಓಹ್! ಓಳ್ಳೆಯ ಅಧ್ಯಾಪಕಿಯರು. ನೀನು ನಮ್ಮೊಬ್ಬನೇ ಮಗುವೆಂದು ತಿಳಿದಾಗ ಏನಂದರು?
ಚಿಕ್ಕ ಬೂಬಣ್ಣ: ಹೆಚ್ಚೇನೂ ಇಲ್ಲಾ.. ‘ಅಬ್ಬಾ! ಬಚಾವಾದೆ!’, ಎಂದರು.. ಅಷ್ಟೇ..

ಹಾಗೂ, ಇಂದಿಗೆ ಕೊನೆಯದಾಗಿ.. »» ಒಮ್ಮೆ ಬೂಬಣ್ಣ ಟೆಂಪೋ ಓಡಿಸುವಾಗ, ಅಪಘಾತವಾಗುತ್ತದೆ..
ಆರಕ್ಷಕ (ಪೋಲೀಸ್): ಏಯ್! ಈ ಅಪಘಾತ ಹೇಗಾಯಿತು? ಇದಕ್ಕೆ ಕಾರಣ ಯಾರು?
ಬೂಬಣ್ಣ: ಗೊತ್ತಿಲ್ಲ ಸ್ವಾಮಿ! ಆಗ ನಾನು ಒಳ್ಳೇ ನಿದ್ರೆಯಲ್ಲಿದ್ದೆ..

ಚಿತ್ರಕೃಪೆ: Torchlight_help_red.png By Yan Shuangchun (phytonix gmail com)Arz [LGPL], via Wikimedia Commons

Advertisements

7 thoughts on “ದೇವರೆಲ್ಲಿರುವನು?….

 1. ಮಹೇಶಣ್ಣಾ.. ಒಂದು ಸಾಲದೆಂದು ಅಲ್ಲಪ್ಪಾ… ಇದು ಹಾಸ್ಯಕ್ಕೆಂದೇ ಮೀಸಲಿಟ್ಟ ಬ್ಲಾಗು 🙂
  —-

  ನೀಲಿ ಹೂದೋಟದ ಮಾಲಿಗಳೇ! ಪರೀಕ್ಷಿಸಿದ browserಗಳಲ್ಲೆಲ್ಲ ಸರಿಯಾಗಿಯೇ ತೋರುತ್ತಿದೆ. ದಯವಿಟ್ಟು ನಿಮ್ಮ browser ಯಾವುದು, ಹಾಗೂ ಅದರ version ಯಾವುದೆಂದು ತಿಳಿಸಿದರೆ, ಮುಂದಕ್ಕೆ ಪರೀಕ್ಷಿಸಲು ಸಹಾಯವಾಗುತ್ತದೆ. ನಿಮ್ಮ browserನಲ್ಲಿ “zoom” option ಅನ್ನು ಉಪಯೋಗಿಸಿ ನೋಡಿ. firefox ನಲ್ಲಿ Ctrl ಮತ್ತು + ಗುಂಡಿಗಳನ್ನು ಒಟ್ಟಾಗಿ ಒತ್ತಿದರೆ zoom in ಆಗುತ್ತೆ. Ctrl ಮತ್ತು -, zoom out ಮಾಡಲು. 🙂

 2. ಏನ್ರಿ ಕನ್ನಡಕ್ಕೆ ಇಳಿಸುವಾಗ ಅದಾ ಜಾಯಮಾನ ಪರಿಕ್ಷಿಸೋದಲ್ವೇ?
  ಓ ದೇವ್ರೆ ನಿನಿನ್ನೂ ಇಲ್ಲಿದ್ದೀಯಾ… ಅಂತಂದ್ರೆ ಅರ್ಥವಾಗುತ್ತೇನ್ರೆ? ‘Jesus Christ! you are still here?’ ಅಂತಲ್ವೇನ್ರಿ ಇದು ಮೂಲದಲ್ಲಿ ಇರೋದು?

  – ನಗೆ ಸಾಮ್ರಾಟ್

 3. “ನಗೆ ಸಾಮ್ರಾಟ್”ರೇ, ನೀವು ಇದರ ಆಂಗ್ಲ ರೂಪವನ್ನು ಎಲ್ಲಿ ಓದಿದ್ದೀರೋ ನೀವೇ ತಿಳಿಸಬೇಕು. “oh god! you are still here?!” ಅಂತಾ ಇತ್ತು, ನನಗೆ ಒಬ್ಬರು ಕಳುಹಿಸಿದರಲ್ಲಿ. ಹಾಗಂದರೆ ಅರ್ಥವಾಗುವುದಿಲ್ಲವೆಂದರೇನಪ್ಪಾ? ಹಾಸ್ಯವಿರುವುದು ನಕ್ಕು ಬಿಡಲು. ಒಂದೇ ಹಾಸ್ಯ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ, ವಿಧ ವಿಧದ version ಗಳಲ್ಲಿ ಕಂಡುಬರುವುದು ನಿಮಗೆ ತಿಳಿದಿಲ್ಲವೋ? ಹಾಸ್ಯಕ್ಕೆ ಮೂಲವೆಲ್ಲಿದೆ ಕಣ್ರೀ? ನಗೆ ಸಾಮ್ರಾಟ್ ಅಂದುಕೊಳ್ಳುವ ನೀವೇ ತಿಳಿಸಬೇಕು… 🙂

 4. ಹಾಸ್ಯಕ್ಕೆ ಮೂಲ ಎಲ್ಲಿದೆ ಅಂತ ಹುಡುಕಲು ಹೊರಡಬೇಡ್ರಿ, ನದಿ ಮೂಲ, ಋಷಿ ಮೂಲದಂಥದ್ದು ಅದು.
  ಆದ್ರೆ ನಿಮಗೆ ಸಿಕ್ಕ ಮೂಲದ ಬಗ್ಗೆಯಾದರೂ ಒಸಿ ತಿಳಿದಿರಬೇಕಲ್ವೇ?
  ನಗುವುದು ಸುಲಭ ಬಿಡ್ರೀ. ಸುಮ್ನೆ ಕಾಲೆಳೆದೆ, ನಕ್ಕು ಸುಮ್ನಾಗಿಬಿಡಿ… 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s