ಬೆಕ್ಕು ಅಡ್ಡದಾಟಿದರೆ ಅಪಶಕುನವೇ?

»»ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡದಾಟಿದರೆ ಅಪಶಕುನವೇ?
ಹೌದು! ನೀವು ಇಲಿಯಾಗಿದ್ದರೆ ಮಾತ್ರ…

ಬೆಕ್ಕು ಅಡ್ಡದಾಟಿದರೆ ಅಪಶಕುನವೇ?

ಬೆಕ್ಕು ಅಡ್ಡದಾಟಿದರೆ ಅಪಶಕುನವೇ?

»»ದಿನಪತ್ರಿಕೆಯಲ್ಲಿ ಒಂದು ಜಾಹೀರಾತು ಹೀಗಿತ್ತು:
ನೀವು ಕುರುಡರೇ? ನಿಮಗೇನೂ ಕಾಣಿಸಲ್ವೇ? ಏನನ್ನೂ ಓದಲು, ಬರೆಯಲು ಆಗುತ್ತಿಲ್ವೇ?
ಹಾಗಿದ್ರೆ ಈಗಲೇ ನಮ್ಮ ಕುರುಡರ ಶಾಲೆಗೆ ಸೇರಿ!

»»
ರೋಗಿ: ವೈದ್ಯರೇ! ಈ ಶಸ್ತ್ರಚಿಕಿತ್ಸೆಯಿಂದ ನಾನು ಉಳಿಯಬಲ್ಲೆನೇ?
ವೈದ್ಯ: ತಜ್ಞರು ಹೇಳುವಂತೆ, ಈ ಶಸ್ತ್ರಚಿಕಿತ್ಸೆಯಲ್ಲಿ ಉಳಿಯುವ ಸಾಧ್ಯತೆ ಹತ್ತರಲ್ಲಿ ಒಂದು! ಈಗಾಗಲೇ ಒಂಭತ್ತು ಜನ ಸತ್ತುಹೋಗಿದ್ದರಿಂದ, ನೀವು ೧೦೦% ಬದುಕುಳಿಯುತ್ತೀರ…

»»
ರೋಗಿಯ ಪರಿವಾರದವರು ( ವೈದ್ಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರ ಬರುತ್ತಿದ್ದಂತೆ) : ಶಸ್ತ್ರಚಿಕಿತ್ಸೆ ಸಫಲವಾಯ್ತೇ? ಅವರು
ಚೆನ್ನಾಗಿದ್ದರೆಯೇ?
ವೈದ್ಯ: ಶಸ್ತ್ರಚಿಕಿತ್ಸೆಯೇ? ಅಯ್ಯಯ್ಯೋ!!! ನಾನದು ಮರಣೋತ್ತರ ಕ್ರಿಯೆ (post mortem) ಅಂದುಕೊಂಡೆನಲ್ಲಾ..

»»
ಅಜ್ಜಿ: ಮಗುವೇಕೆ ಅಳುತ್ತಿದೆ? ಅದಕ್ಕೆ ಬೇಕಾದುದನ್ನು ಕೋಡಬಾರದೇ?
ಅಮ್ಮ: ಅದು ಕೇಳಿದ್ದನ್ನು ಕೋಟ್ಟಿದ್ದಕ್ಕೇ ಅಳುತ್ತಿರುವುದು…
ಅಜ್ಜಿ: ಏನದು?!
ಅಮ್ಮ: ಮೆಣಸಿನಕಾಯಿ…

»»
ಒಮ್ಮೆ ಬೂಬಣ್ಣ ಅಮೇರಿಕಕ್ಕೆ ಪ್ರವಾಸ ಹೋದನು. ಅಲ್ಲಿ ಅಮೀರಿಕಾದ ಬಾರ್ ಒಂದರಲ್ಲಿ ಇನ್ನಿಬ್ಬರು ಪ್ರವಾಸಿಗರು, ಒಬ್ಬ ಗ್ರೀಕ್, ಒಬ್ಬ ಚೀನಿ (ಚೈನೀಸ್) ಯನ್ನು ಭೇಟಿಯಾಗಿ ಅವರ ಜೊತೆ ಕಂಠಪೂರ್ತಿ ಕುಡಿದುಬಿಟ್ಟನು…
ಗ್ರೀಕ್: ನಮ್ಮ ದೇಶದಲ್ಲಿ ಪುರಾತತ್ವ ಇಲಾಖೆಯವರು ಅಗೆಯುವಾಗ ಟೆಲೆಗ್ರಾಫ್ ತಂತಿಗಳು ದೊರೆತವು. ನಮ್ಮ ಪ್ರಾಚೀನ ನಾಗರೀಕತೆಯೆಷ್ಟು ಮುಂದುವರೆದಿತ್ತೆಂದು ಇದರಿಂದ ತಿಳಿಯುತ್ತದೆ,..
ಚೀನೀ: ಛೇ! ಅದೇನಿಲ್ಲ. ನಮ್ಮಲ್ಲಿ ನಡೆದ ಅನ್ವೇಷಣೆಯಲ್ಲಿ ಅಗೆಯುವಾಗ ದೂರವಾಣಿ ತಂತಿಗಳು ಸಿಕ್ಕವು. ನಮ್ಮ ಪ್ರಾಚೀನ ನಾಗರೀಕತೆ ಇನ್ನೂ ಹೆಚ್ಚಿಗೆ ಮುಂದುವರೆದಿತ್ತು…
ಬೂಬಣ್ಣ: ಹ್ಹಾ ಹ್ಹಾ! ನಿಮ್ದೇನ್ ಮಹಾ? ನಮ್ಮಲ್ಲಿ ಅಗೆತದ ವೇಳೇ ಯಾವುದೇ ತಂತಿಗಳೂ ದೊರೆಯಲಿಲ್ಲ.. ಏಕೆ ನಗುತ್ತೀರಿ? ಅದೇಕೆಂದರೆ, ಪ್ರಾಚೀನ ಭಾರತದಲ್ಲಿ ಉಪಗ್ರಹ ತಂತ್ರಜ್ಞಾನದಿಂದ ಪ್ರಸಾರ ನಡೆಯುತ್ತಿತ್ತು. ಪ್ರಾಚೀನ ಭಾರತೀಯರೇ ಹೆಚ್ಚಿಗೆ ಮುಂದುವರೆದಿದ್ದರು…

»»
ರಾಮಣ್ಣ: ಬಾ, ಚದುರಂಗ (ಚೆಸ್) ಆಡೋಣ..
ಬೂಬಣ್ಣ: ಇಲ್ಲ.
ರಾಮಣ್ಣ: ಯಾಕಪ್ಪಾ? ನಿನಗೆ ಚದುರಂಗ ಆಡಲು ಬರುವುದಿಲ್ವೇ?
ಬೂಬಣ್ಣ: ಆಡಲು ನನಗೆ ಗೊತ್ತು. ಆದರೆ ನನ್ನ ಆಟದ ಪಾದುಕೆಗಳು ಹರಿದುಹೋಗಿವೆ.

»»ಹಾಗೂ, ಇಂದಿಗೆ ಕೊನೆಯದಾಗಿ,
ಸೋಮಯ್ಯ ಎಷ್ಟು ಸೋಮಾರಿಯೆಂದರೆ,
ಚಳಿಗಾಲದಲ್ಲಿ ಕನ್ನಡಿಯ ಮುಂದೆ ನಿಂತು ಓಂದು ಬಕೀಟ್ ನೀರನ್ನು ಕನ್ನಡಿಯ ಮೇಲೆ ಹಾಕಿ, “ಅಬ್ಬಾ! ಸ್ನಾನ ಆಯ್ತು” ಅಂತಾನೆ..

————————————————————————————————
»»ಓ! ಮರೆತೇಬಿಟ್ಟಿದ್ದೆ! ನಿಮಗೊಂದು ಒಳ್ಳೆಯ ಸುದ್ದಿ:
ಈಗ ಹಾಸ್ಯವನ್ನು ಆಂಗ್ಲದಲ್ಲೂ ಸವಿಯಿರಿ! ಪ್ರಹಾಸ ಈಗ ಆಂಗ್ಲ ಭಾಷೆಯಲ್ಲಿ ಸಹ!
»» ಈಗಲೇ ಭೇಟಿನೀಡಿ!
Enjoy the Jokes in English too! Now Prahaasa in English!
»»Have a Look Now!

————————————————————————————————
ಚಿತ್ರಕೃಪೆ: Nuvola_apps_package_toys.png Image from the Nuvola icon theme for KDE 3.x by David Vignoni Source: http://www.icon-king.com

ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು…

ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು…

ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು…


»»
ಸೊಳ್ಳೆ ಕಾಟ ತಡೆಯಲಾರದೆ ಬೂಬಣ್ಣ ಮಂಚದ ಕೆಳಗೆ ಮಲಗಿದ. ಆಗ ಅಲ್ಲಿಗೆ ಬಂದ ಮಿಂಚು ಹುಳವ ನೋಡಿ, ಸೊಳ್ಳೆ ಅಂದುಕೊಂಡು, “ಅಯ್ಯೋ ಪಾಪಿ! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು!!”

»»
ಹುಡುಗ: ಐ ಲವ್ ಯೂ ಕಣ್ರೀ…
ಹುಡುಗಿ (ಗುರ್ರಾಯಿಸುತ್ತ): ನನ್ನ ಚಪ್ಪಲಿ ಸೈಜ಼್ ಗೊತ್ತಾ…
ಹುಡುಗ: ಛೇ! ಏನ್ ಹುಡ್ಗೀರಪ್ಪಾ… ಐ ಲವ್ ಯೂ ಅಂದ್ರೆ ಸಾಕು, ಗಿಫ್ಟ್ ಕೇಳೋಕೆ ಶುರು ಮಾಡ್ತಾರೆ…

»»
ವೈದ್ಯ: ನಿಮ್ಮ ದೇಹದಲ್ಲಿ ೨೬೫ ಮೂಳೆಗಳಿವೆ..
ಬೂಬಣ್ಣ: ಮೆತ್ತಗೆ ಹೇಳೊ! ಹಿಂದ್ಗಡೆ ನನ್ನ ನಾಯಿ ಕುಳಿತಿದೆ..

»»
ಒಂದು ಬೋರ್ಡ್ ಹೀಗಿತ್ತು:
ಬನಾರಸ್ ಸೀರೆ- ರೂ.10
ನೈಲಾನ್ ಸೀರೆ- ರೂ.8
ಕಾಟನ್ ಸೀರೆ- ರೂ 5
ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ..
ಗಂಡ: ಲೇ, “ಇಸ್ತ್ರೀ ಅಂಗಡಿ” ಕಣೇ ಅದು!!

»»
ವೈದ್ಯ: ನೀವು ನಿಮ್ಮ ಮಿತ್ರನನ್ನು ಒಂದು ಘಂಟೆ ಮೊದಲೇ ಆಸ್ಪತ್ರೆಗೆ ತಂದಿದ್ದರೆ ಆತ ಉಳಿಯುತ್ತಿದ್ದ…
ಮಿತ್ರ (ಸಿಟ್ಟಿನಿಂದ): ಲೋ ಗೂಬೆ, ಅಪಘಾತ ಆಗಿ ಅರ್ಧ ಘಂಟೆ ಅಷ್ಟೇ ಆಯ್ತು…

»»
ಹೆಂಡತಿ ಗಂಡನಿಗೆ ವ್ಯಾಕರಣ ಕಲಿಸುತ್ತಿದ್ದಳು: “ನಾನು ಸುಂದರವಾಗಿದ್ದೇನೆ.” ಇದು ಯಾವ ಕಾಲ?
ಗಂಡ: ಭೂತಕಾಲ…

»» ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು:
ಹೆಂಡತಿ ಓಡೋಡಿ ಬಂದು, ಗಂಡನ ಬಳಿ: ರ್ರೀ!!! ಬೇಗ ಬನ್ರೀ.. “ನಿಮ್ಮ” ಮಕ್ಕಳು ಹಾಗೂ “ನನ್ನ” ಮಕ್ಕಳು ಸೇರಿಕೊಂಡು “ನಮ್ಮ” ಮಕ್ಕಳನ್ನು ಹೊಡೆಯುತ್ತಿದ್ದಾರೆ…

»»
ಹುಡುಗ: ಹುಡುಗರ ಹೃದಯ ದೇಗುಲದಷ್ಟು ಪವಿತ್ರವಾದುದು…
ಹುಡುಗಿ: ಅದು ಹೇಗೆ?
ಹುಡುಗ: ಐ ಲವ್ ಯೂ ಅಂದಾಕ್ಷಣ ಚಪ್ಪಲಿ ತೆಗೀತೀರಲ್ಲಾ.. ಅದಕ್ಕೆ…

ಹಾಗೂ ಇಂದಿಗೆ ಕೊನೆಯದಾಗಿ….»»
ಪಿಂಟೂಗೆ ಕೈ ಉಗುರು ತಿನ್ನೋ ಕೆಟ್ಟ ಅಭ್ಯಾಸವಿತ್ತು.
ಆದಕ್ಕೆ ಆತನನ್ನು ಚಿಕಿತ್ಸೆಗೆ ಬಾಬಾ ಯೋಗಾಶ್ರಮಕ್ಕೆ ಕರೆದೊಯ್ಯುತ್ತಿದ್ದರು…
ಈಗ ಪಿಂಟೂ ತನ್ನ ಕಾಲಿನ ಉಗುರುಗಳನ್ನೂ ತಿನ್ನಬಲ್ಲ…

ಚಿತ್ರಕೃಪೆ: Gohomenew.png By Everaldo Coelho (YellowIcon) [LGPL or LGPL], via Wikimedia Commons

ಸೆಖೆ ಆದಾಗ ಏನು ಮಾಡುವುದು?

ಸೆಖೆ ಆದಾಗ ಏನು ಮಾಡುವುದು?

ಸೆಖೆ ಆದಾಗ ಏನು ಮಾಡುವುದು?


»»
ಚೋಮಣ್ಣ: ಬೂಬಣ್ಣ! ಸೆಖೆ ಆದಾಗ ಏನು ಮಾಡುವುದು?
ಬೂಬಣ್ಣ: ಹವಾನಿಯಂತ್ರಕದ(air conditioner) ಎದುರು ಕುಳಿತುಬಿಡು.
ಚೋಮಣ್ಣ: ಇನ್ನೂ ಹೆಚ್ಚಿಗೆ ಸೆಖೆ ಆದರೆ….?
ಬೂಬಣ್ಣ: ಆಗ ಹವಾನಿಯಂತ್ರಕವನ್ನು ಚಾಲೂ (on) ಮಾಡು…

»»
ರೋಗಿ: ನನಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಿದ್ರೆ ಬರುತ್ತದೆ…
ವೈದ್ಯ: ಅದಕ್ಕೇನೀಗ? ಚೆನ್ನಾಗಿ ನಿದ್ರೆ ಮಾಡಿ. ಏನು ಗೊರಕೆ ಸಮಸ್ಯೆನಾ?
ರೋಗಿ: ಪೂರ್ತಿ ಕೇಳಿಸ್ಕೊಳ್ಳಿ ಸಾರ್. ಗೊರಕೆ ಗಿರಕೆ ಆಮೇಲಾಯ್ತು ಬಿಡಿ, ಆ ಬಸ್ಸಿನ ಚಾಲಕ* (driver) ನಾನೇ!

»»
ಬೂಬಣ್ಣ: ಸ್ವಾಮೀಜಿ! ನಾನು ಏನೂ ಕೆಲಸ ಮಾಡುವ ಅಗತ್ಯವಿಲ್ಲದೇ ಇರೋ ನೌಕರಿ ಯಾವುದಿದೆ? ಅದರಲ್ಲಿ ಬೇರೆಯವರೇ ಕೆಲಸ ಮಾಡಬೇಕು, ಆದರೆ ಹಣ ನನಗೆ ಸಿಗಬೇಕು…
ಸ್ವಾಮೀಜಿ: ಮಗೂ.. ಹೋಗು! ಶೌಚಾಲಯದಲ್ಲಿ ಕೆಲಸ ಮಾಡು…

»» ಬೂಬಣ್ಣನವರು ಚಿಕ್ಕವರಾಗಿದ್ದಾಗ…
ರಾಮಣ್ಣ: ಪರೀಕ್ಷೆಯಲ್ಲಿ ಬರೆಯಲು ನನಗೇನೂ ಗೋಚರಿಸಲಿಲ್ಲ. ಹಾಳೆ ಖಾಲಿ ಬಿಟ್ಟು ಬಂದೆ..
ಚೋಮಣ್ಣ: ನಾನೂ ಸಹ… ಖಾಲಿ ಹಾಳೆ ಕೊಟ್ಟು ಬಂದೆ..
ಬೂಬಣ್ಣ: ಆಯ್ಯಯ್ಯೋ! ನನ್ನ ಹಾಳೆಯೂ ಖಾಲಿಯಾಗೇ ಇತ್ತು! ನಾವು ನಕಲು*(copy) ಹೊಡೆದಿದ್ದೇವೆಂದು ಮೇಷ್ಟ್ರು ಭಾವಿಸುತ್ತಾರೆ!!

»»
ಜೀವಶಾಸ್ತ್ರದ ಶಿಕ್ಷಕಿ: ನಮಗೆ ಮೊಟ್ಟೆ ಕೊಡುವ ಯಾವುದಾದರೂ ನಾಲ್ಕು ಜೀವಿಗಳ ಹೆಸರು ಹೇಳು.
ಬೂಬಣ್ಣ: ಭೌತಶಾಸ್ತ್ರ ಅಧ್ಯಾಪಕರು, ಗಣಿತಶಾಸ್ತ್ರ ಅಧ್ಯಾಪಕರು, ರಾಸಯನಶಾಸ್ತ್ರದ ಅಧ್ಯಾಪಕಿ, ಹಾಗೂ ಕನ್ನಡದ ಅಧ್ಯಾಪಕಿ…

»» ತರಗತಿ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಚೋಮಣ್ಣ ಎದ್ದು ಹೊರಗೆ ನಡೆದ.
ಶಿಕ್ಷಕ: ಇದೇನಿದು?! ಇವನಿಗೇನಾಗಿದೆ?
ಬೂಬಣ್ಣ: ಸಾರ್, ಅವನಿಗೆ ಒಳ್ಳೇ ನಿದ್ರೆಯಲ್ಲಿ ನಡೆದಾಡುವ ಅಭ್ಯಾಸವಿದೆ…

»» ಬೂಬಣ್ಣನ ಮನೆಯ ಪ್ಲಗ್ನಲ್ಲಿ ಹೊಗೆ ಬರ್ತಾ ಇತ್ತು.
ತಕ್ಷಣ ಬೂಬಣ್ಣ ಮೆಸ್ಕೋಮ್ ಗೆ (MESCOM) ಫೋನ್ ಮಾಡಿ, “ಏಯ್! ಯಾರಯ್ಯಾ ಅದು? ಸಿಗರೇಟು ಸೇದಿ ನಮ್ಮನೆ ಪ್ಲಗ್ಗಿನಲ್ಲಿ ಹೊಗೇ ಬಿಡೋದು?!”

»»
ಬಸ್ ಕಂಡಕ್ಟರ್: ಅಜ್ಜಿ! ಮೂರು ಸಲ ನಿಮ್ಮ ಸ್ಟಾಪ್ ಬಂತು ಅಂತ ಶಿಳ್ಳೆ ಹೊಡೆದ್ರೂ ತಿರುಗಿಯೂ ನೋಡಿಲ್ವಲ್ಲಾ ನೀವು…
ಅಜ್ಜಿ: ಮಗೂ, ಶಿಳ್ಳೆ ಹೊಡೆದ್ರೆ ತಿರುಗಿ ನೋಡೊ ವಯಸ್ಸಲ್ಲಪ್ಪಾ ನಂದು…

ಹಾಗೂ ಇಂದಿಗೆ ಕೊನೆಯದಾಗಿ…»»
ರಾಮಣ್ಣ: ನೀರು ಕುದಿಸಿದಾಗ ಅದರಲ್ಲಿರುವ ಕೀಟಾಣುಗಳೆಲ್ಲ ಸತ್ತು ಹೋಗುತ್ತವೆ. ಆದ್ದರಿಂದ ಕುದಿಸಿದ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು…
ಬೂಬಣ್ಣ: ಅಯ್ಯೋ! ಆದರೆ ಸತ್ತು ಹೋದ ಕೀಟಾಣುಗಳ ಶವಗಳು ಆ ನೀರಲ್ಲೇ ತೇಲುತ್ತಿರುತ್ತವಲ್ಲಾ!!!

ಚಿತ್ರಕೃಪೆ: 500px-Air_conditioner.png By Paul Robinson (New Image) [LGPL, GFDL or CC-BY-SA-3.0], via Wikimedia Commons